ಚಿಂಚೋಳಿ: ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಆರೋಪಿ ಬಂಧನ
ಕಲಬುರಗಿ : ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ, ಕಲ್ಲು ಗಣಿಗಾರಿಕೆ ಮಾಲೀಕ ಸದ್ದಾಂ ಅಲೀಯನ್ನ ಮಿರಿಯಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.. ಅಕ್ಟೋಬರ್ 27 ರಂದು ಮಧ್ಯಾನ 2 ಗಂಟೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.. ಕಲ್ಲು ಗಣಿಗಾರಿಕೆ (ಪರ್ಸಿ ಪಾಲಿಶಿಂಗ್) ಘಟಕದಲ್ಲಿ ತಂದೆಯೊಂದಿಗೆ ವಾಸವಾಗಿದ್ದ 15 ವರ್ಷದ ಬಾಲಕಿ ಮೇಲೆ ಗಣಿಗಾರಿಕೆ ಮಾಲೀಕ ಸದ್ದಾಂ ಅತ್ಯಾಚಾರ ಎಸಗಿದಾನೆಂದು ಪೋಷಕರು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.