ಇಳಕಲ್: ತಾಲೂಕಿನಾದ್ಯಂತ ಸುರಿದ ಮಳೆಗೆ ೧೮ ಮನೆಗಳ ಕುಸಿತ
Ilkal, Bagalkot | Sep 16, 2025 ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಒಟ್ಟು ೧೮ ಮನೆಗಳು ಕುಸಿತವಾಗಿವೆ ಎಂದು ತಹಸೀಲ್ದಾರ ಅಮರೇಶ ಪಮ್ಮಾರ ಹೇಳಿದ್ದಾರೆ. ಇಳಕಲ್ ನಗರದಲ್ಲಿ ಒಂದು ಮನೆ , ಗೂಡುರ ಎಸ್ ಸಿ ಗ್ರಾಮದಲ್ಲಿ ಮೂರು, ಕಂಬಳಿಹಾಳದಲ್ಲಿ ಎರಡು, ಕೆಲೂರ ಗ್ರಾಮದಲ್ಲಿ ಮೂರು, ಚಿಕ್ಕಕೊಡಗಲಿ, ಬಲಕುಂದಿ, ಹೊಸೂರ, ದಮ್ಮೂರ, ವಜ್ಜಲ, ಗೋನಾಳ, ತುಂಬ, ಸೋಮಲಾಪೂರ, ಜಂಬಲದಿನ್ನಿ ಗ್ರಾಮಗಳಲ್ಲಿ ತಲಾ ಒಂದು ಮನೆ ಬಿದ್ದಿವೆ ಎಂದು ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಪ್ರಕಾಶ ವಜ್ಜಲ ಸೆ.೧೬ ಮಧ್ಯಾಹ್ನ ೧೨ ಗಂಟೆಗೆ ಮಾಧ್ಯಮಕ್ಕೆ ಮಾಹಿತಿಯನು ನೀಡಿದ್ದಾರೆ.