ಕೊಳ್ಳೇಗಾಲ: ಕೊಳ್ಳೇಗಾಲದ ಆರ್ ಎಸ್ ಎಂ ಸಿ ವಳಿ ಅಪರಿಚಿತ ವಾಹನ ಡಿಕ್ಕಿ – ಇಬ್ಬರಿಗೆ ತೀವ್ರ ಪೆಟ್ಟು
ಕೊಳ್ಳೇಗಾಲ ಪಟ್ಟಣದ ಆರ್‌ಎಂಸಿ ಬಳಿ ಮಂಗಳವಾರ ಮಧ್ಯರಾತ್ರಿ, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ತೀವ್ರ ಪೆಟ್ಟು ಆಗಿರುವ ಘಟನೆ ನಡೆದಿದೆ. ಕೊಳ್ಳೇಗಾಲದ ಬಿನ್ ಜಾನ್ಸನ್ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ಮನೆಗೆ ಮದ್ಯರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಅಪರಿಚಿತ ವಾಹನವೊಂದು ಅವರು ಓಡಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯನ್ನು ಗಮನಿಸಿದ ಸ್ಥಳೀಯರು ಹಾಗೂ ಕನ್ನಡ ಪರ ಹೋರಾಟಗಾರ ಆಯಾಜ್ ಕೂಡಲೆ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ