ಧಾರವಾಡ: ನವೆಂಬರ್ 1 ರಿಂದ ಒಂದು ತಿಂಗಳ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯಕ್ರಮ: ನಗರದಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ
ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ನಾಡಹಬ್ಬ ೭೦ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಂಗೀತ, ನೃತ್ಯ, ನಾಟಕ, ಸಾಧಕರಿಗೆ ಸನ್ಮಾನ, ಧರೆಗೆ ದೊಡ್ಡವರು ತಿಂಗಳ ಕಾರ್ಯಕ್ರಮ ನ.೧ರಿಂದ ೩೦ರವರೆಗೆ ಸಂಘದಲ್ಲಿ ಹಮ್ಮಿಕೊಂಡಿದೆ ಎಂದು  ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ತಿಳಿಸಿದರು. ನ.೧ರ ಬೆಳಿಗ್ಗೆ ೯ಕ್ಕೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ, ೧೦.೩೦ಕ್ಕೆ ನಾಡೋಜ ಡಾ. ಪಾಪು ಭವನದಲ್ಲಿ ತಿಂಗಳ ಕಾರ್ಯಕ್ರಮ ಚಾಲನೆ ನೀಡಲಾಗುವುದು ಎಂದರು.