ಹುಮ್ನಾಬಾದ್: ನವರಾತ್ರಿ ಉತ್ಸವ ಹಿನ್ನೆಲೆ ಭಾವಸಾರ ಕ್ಷತ್ರಿಯ ಸಮಾಜದಿಂದ ವಿಶೇಷ ಪೂಜೆ ಸಲ್ಲಿಸಿ, ದೇವತೆಗಳಿಗೆ ಆಮಂತ್ರಣ
ನವರಾತ್ರಿ ಉತ್ಸವ ನಿಮಿತ್ತ ನಗರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಬುಧವಾರ ರಾತ್ರಿ 8ಕ್ಕೆ ಪರಂಪರೆಯಂತೆ ಭಾಗವಾನ್ ಓಣಿಯ ಕಾಳಿಕಾ ದೇವಸ್ಥಾನ ಸಮೀಪದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವತೆಗಳಿಗೆ ಆಮಂತ್ರಿಸಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಸುರೇಶ್ ಕಮಿತ್ಕರ, ಉಪಾಧ್ಯಕ್ಷ ಗಿರಿಧರ್ ಕೈಜೋಡೆ, ಪ್ರಧಾನ ಕಾರ್ಯದರ್ಶಿ ದಿಗಂಬರ್ ಕಮಿತ್ಕರ, ಸಹಕಾರ್ಯದರ್ಶಿ ದಯಜೋಡೆ, ಮಹಿಳಾ ಘಟಕದ ಅಧ್ಯಕ್ಷ ರಾಜಶ್ರೀ ವಳಸೆ ಹಾಗೂ ಪದಾಧಿಕಾರಿಗಳಿದ್ದರು.