ಮಂಡ್ಯ: ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಸಂಘದ ಚುನಾವಣೆ, ಪ್ರಣಾಳಿಕೆ ಬಿಡುಗಡೆ
Mandya, Mandya | Nov 7, 2025 ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ಪವರ್ ಟಿ.ವಿ. ಜೆ.ಎಂ.ಬಾಲಕೃಷ್ಣ ಅವರ ನೇತೃತ್ವದ ತಂಡದ ಮುಂದಿನ ಕಾರ್ಯ ಯೋಜನೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ನವೀನ್ ಚಿಕ್ಕಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆ.ಎಂ.ಬಾಲಕೃಷ್ಣ ಅವರ ನೇತೃತ್ವದ ತಂಡದಲ್ಲಿನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರಣಾಳಿಕೆಯಲ್ಲಿ ಭರವಸೆ ಜಾರಿಗೆ ಸಹಕರಿಸುವಂತೆ ಕೋರಿದರು. ತಂಡದಿಂದ ಅಧ್ಯಕ್ಷ ಸ್ಥಾನಕ್ಕೆ ಜೆ.ಎಂ.ಬಾಲಕೃಷ್ಣ, ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಹೆಚ್.ಬಿ.ಸುನಿಲ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ನವೀನ್ (ನವೀನ್ ಚಿಕ್ಕಮಂಡ್ಯ), ರವಿ.ಕೆ, ಅಣ್ಣೂರು ಸತೀಶ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಶಂಭುಲಿಂಗೇಗೌಡ, ಖಜಾಂ