ಬೆಂಗಳೂರು ಉತ್ತರ: ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ನಡಿಗೆ: ಎಂ.ಜಿ ರಸ್ತೆಯಿಂದ ಕಾಫಿ ಮಂಡಳಿಯವರೆಗೂ ಜಾಥ
ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಭಾರತೀಯ ಕಾಫಿ ಮಂಡಳಿ ಮತ್ತು ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಸಹಯೋಗದಲ್ಲಿ ವಾಕ್ ವಿತ್ ಕಾಫ್ ಎಂಬ ವಿಶಿಷ್ಟ ಜಾಗೃತಿ ಅಭಿಯಾನ ನಡೆಯಿತು. ಬೆಂಗಳೂರು ನಗರದ ಎಂ.ಜಿ.ರಸ್ತೆಯಿಂದ ಕಾಫಿ ಮಂಡಳಿ ಕಚೇರಿಯವರೆಗೂ ನಡೆದ ವಾಕಥಾನ್ ನಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ಅವರ ನೇತೃತ್ವದಲ್ಲಿ ನಡೆದ ವಾಕಾ ಥಾನ್ ನಲ್ಲಿ ಕಾಫಿಯಿಂದ ಮನುಷ್ಯನ ಆರೋಗ್ಯದ ಮೆಲೆ ಆಗುವ ಪ್ರಯೋಜನಗಳ ಕುರಿತು ಜನರಿಗೆ ತಿಳಿಸುವ ಫಲಕಗಳನ್ನು ಪ್ರದರ್ಶನ ಮಾಡಲಾಯಿತು.