ಚಿತ್ರದುರ್ಗ: ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮುದಾಯ ಭಾಗಿಯಾಗಬೇಕು: ಚಿತ್ರದುರ್ಗದಲ್ಲಿ ಮಾಜಿ ಮಂತ್ರಿ ಎಚ್.ಆಂಜನೇಯ ಹೇಳಿಕೆ
ಚಿತ್ರದುರ್ಗದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಬುಧವಾರ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತ್ನಾಡಿದ ಅವರು ರಾಜ್ಯದಲ್ಲಿ ಎರಡು ಸಮೀಕ್ಷೆ ಸರ್ವೆ ನಡೆಯುತ್ತಿದೆ, ಅದರಲ್ಲಿ ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಹಾಗೂ ದೇವದಾಸಿಯರ ಸರ್ವೆ ನಡೆಯುತ್ತಿದೆ. ಒಳ ಮೀಸಲಾತಿ ಸರ್ಕಾರ ಕೂಡಾ ಈಗಾಗಲೇ ಜಾರಿ ಮಾಡಿದೆ. ಅದರಲ್ಲಿ AD & AK ಗುಂಪುಗಳು ಮಾಡಿದ್ದರು. ಮಾದಿಗರು A ಗುಂಪಿಗೆ ಸೇರಬೇಕು ಒಲೆಯರು B ಗುಂಪಿಗೆ ಸೇರಬೇಕಿದೆ ಎಂದಿದ್ದರು. ಇದೀಗ ಸಾಮಾಜಿಕ ಶೈಕ್ಷಣಿಕ ಸರ್ವೆಯಲ್ಲಿ ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಎಂದು ಬರೆಸಿದ್ರೆ, ಚಿಪ್ಪು ಸಿಗುತ್ತೆ. ಸರ್ವೆ ನಡೆಯುವ ವೇಳೆ ಕಡ್ಡಾಯವಾಗಿ ಮಾದಿಗ ಅಥವಾ ಒಲೆಯ ಎಂದು ಬರೆಸಬೇಕು ಎಂದರು