ಹಾರೋಹಳ್ಳಿ: ಕಗ್ಗಲೀಪುರ ಬೈಪಾಸ್ ಗೆ ಆಗ್ರಹಿಸಿ ಪ್ರತಿಭಟನೆ: ಹಾರೋಹಳ್ಳಿಯಲ್ಲಿ ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾದ್ಯಕ್ಷ ನದೀಮ್ ಪಾಷಾ
ಕಗ್ಗಲಿಪುರ ಟೋಲ್ ಬಳಿ ಬೈಪಾಸ್ ಅನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಮುಂದಿನ ತಿಂಗಳು 15 ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಅಂತ ಹೇಳಿ ರಾಜ್ಯ ರೈತ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದೀಮ್ ಪಾಷಾ ತಿಳಿಸಿದರು. ಹಾರೋಹಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ಅವರು ಮಾತನಾಡಿದರು. ಬೈಪಾಸ್ ಇಲ್ಲದೆ ವಾಹನ ಸವಾರರು ಪರಿ ತಪ್ಪಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತು ಬೈಪಾಸ್ ನಿರ್ಮಾಣ ಮಾಡಬೇಕು ಅಂತ ಹೇಳಿ ಒತ್ತಾಯಿಸಿದರು.