ಸೂಪಾ: ಜೋಯಿಡಾ ತಾಲೂಕಿನ ತಿನೈಘಾಟ್ ಹತ್ತಿರ ಸರಣಿ ಭೀಕರ ಅಪಘಾತ, ಐವರಿಗೆ ಗಂಭೀರ ಗಾಯ, ಒಬ್ಬ ಸ್ಥಳದಲ್ಲೆ ಸಾವು .
ಜೋಯಿಡಾ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ - ಗೋವಾ ಸಂಪರ್ಕಿಸುವ ತೀನೈಘಾಟ್ ಹತ್ತಿರ ಸರಣಿ ಭೀಕರ ಅಪಘಾತ ನಡೆದ ಘಟನೆ ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಹೈದರಾಬಾದಿನಿಂದ ಗೋವಾಕ್ಕೆ ತೆರಳಿದ್ದ ಖಾಸಗಿ ವಿಜಯಾನಂದ ಬಸ್ ಎದುರುಗಡೆಯಿಂದ ಮ್ಯಾಗ್ನೆಸ್ ತುಂಬಿಕೊಂಡು ಹೋಗುತ್ತಿದ್ದ ಟ್ರಕ್ಕನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಮುಂಭಾಗದಿಂದ ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ.