ಮುಂಡಗೋಡ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ಸಭೆ
ಮುಂಡಗೋಡ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಬಗರ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ಸಭೆಯನ್ನು ಗುರುವಾರ ಸಂಜೆ 3.30ಕ್ಕೆ ನಡೆಸಿದರು. ಸಕ್ರಮಿಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಶಾಸಕರು ಮಾಹಿತಿಯನ್ನು ಪಡೆದುಕೊಂಡರು. ಸಭೆಯಲ್ಲಿ ಮಂಜೂರಿ ನಕಾಶೆ ತಯಾರಾಗಿ ಬಂದ 17 ಪ್ರಕರಣಗಳಲ್ಲಿ ಜಮೀನನ್ನು ಅರ್ಜಿದಾರರಿಗೆ ಮಂಜೂರಿ ಮಾಡಿದರು.