ಬಾಗಲಕೋಟೆ: ಫೋನ್ ಪೇ ಮಾಡಿಸಿಕೊಂಡ ಸುಲಿಗೆಕೋರರು ಅರೆಸ್ಟ್ , ನಗರದಲ್ಲಿ ಎಸ್ಪಿ ಸಿದ್ದಾರ್ಥ ಗೋಯಲ್
ಹನ್ನೆರಡು ಗಂಟೆಗಳಲ್ಲಿ ಸುಲಿಗೆ ಕೋರರ ಹೆಡೆಮುರಿ ಕಟ್ಟುವಲ್ಲಿ ಬಾಗಲಕೋಟೆಯ ನವನಗರದ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ಅವರು ತಿಳಿಸಿದ್ದಾರೆ.ನಗರದಲ್ಲಿ ಮಾತನಾಡಿರುವ ಅವರು,ಕಳೆದ ಸೆ.29.ರಂದು ನವನಗರದ ಸೆಕ್ಟರ್ ನಂ.90 ರ ನಿರ್ಜನ ಪ್ರದೇಶದಲ್ಲಿ ಕಾರನ್ನ ಅಡ್ಡಗಟ್ಟಿ ಸುಲಿಗೆ ಮಾಡಿದ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.ಬಾಗಲಕೋಟೆ ಮೂಲದ ಸುಲಿಗೆಕೋರರನ್ನ ಬಂಧಿಸುವಲ್ಲಿ ನವನಗರದ ಪೊಲೀಸರು ಯಶಸ್ವಿಯಾಗಿದ್ದು , ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.