ರಾಯಚೂರು: ರಾಯಚೂರು : ಮನೋವಾಂಚಲ್ಯ ಸಿದ್ಧಿ ಅರ್ಚನೆ ಮಾಡಿಸಿದ ಡಿಸಿಎಂ
ಐತಿಹಾಸಿಕ ಪ್ರಸಿದ್ಧ ಪಂಚಮುಖಿ ಆಂಜನೇಯನ ಸನ್ನಿಧಿಯಲ್ಲಿ ಧರ್ಮಪತ್ನಿಯೊಟ್ಟಿಗೆ ವಿಶೇಷ ಮನೋವಾಂಚಲ್ಯ ಸಿದ್ಧಿ ವಿಶೇಷ ಪೂಜೆ ಮಾಡಿಸಿದರು. 16 ವರ್ಷಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳು ತಪೋಗೈದ ಭೂಮಿ ಪಂಚಮುಖಿ. ರಾಯರ ತಪಸ್ಸಿಗೆ ಮೆಚ್ಚಿ ಪಂಚಮುಖಿ ಆಂಜನೇಯ ರಾಯರಿಗೆ ದರ್ಶನವಿತ್ತ ಭೂಮಿ ಪಂಚಮುಖಿ. ಆಂಜನೇಯನ ಸನ್ನಿಧಿಯಲ್ಲಿ ಮನೋವಾಂಚಲ್ಯ ಸಿದ್ಧಿ ಅರ್ಚನೆ ಮಾಡಿಸಿದ್ರೆ ಸಿದ್ಧಿಪ್ರಾಪ್ತಿ ಎಂಬ ಪ್ರತೀತಿ. ಹಿನ್ನಲೆ ಕುಟುಂಬ ಸಮೇತ ಪಂಚಮುಖಿಗೆ ಭೇಟಿ ನೀಡಿ ಆಂಜನೇಯನ ಸನ್ನಿದಿಯಲ್ಲಿ ಮನೋವಾಂಚಲ್ಯ ಸಿದ್ಧಿ ಅರ್ಚನೆ ಮಾಡಿಸಿದ್ದಾರೆ ಎಂದು ಅರ್ಚಕ ಶಾಮಾಚಾರಿ ಹೇಳಿದರು.