ಕಂಪ್ಲಿ: ತಾಲ್ಲೂಕಿನ ಅಭಿವೃದ್ಧಿಗೆ ಶಾಸಕ ಗಣೇಶ್ ರವರಿಗೆ ಯುವಜನರ ಮನವಿ
Kampli, Ballari | Sep 16, 2025 ಸೆಪ್ಟೆಂಬರ್ 16, ಮಂಗಳವಾರ, ಸಂಜೆ 4:30ಕ್ಕೆ ಕಂಪ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಂಪ್ಲಿ ಅಭಿವೃದ್ಧಿಗಾಗಿ ಯುವ ಜನರ ವೇದಿಕೆ ವತಿಯಿಂದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ ಸಲ್ಲಿಸಲಾಗಿದೆ.ಮನವಿಯಲ್ಲಿ, ತಾಲ್ಲೂಕಿನ ಯುವಜನರ ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸ್ಟೇಡಿಯಂ ನಿರ್ಮಿಸಬೇಕು, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಲಾಗಿದೆ.ಇದೇ ರೀತಿ ಪಟ್ಟಣದಲ್ಲಿ ನಿರಾಶ್ರಿತ ಧಾಮ ನಿರ್ಮಾಣ, ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡುವ ಕೆಲ ಇಲಾಖೆ ಅಧಿಕಾರಿಗಳ ವರ್ಗಾವಣೆ, ಕಂಪ್ಲಿ ಮಾರೆಮ್ಮ ದೇವಾಲಯದಿಂದ ವರಲಕ್ಷ್ಮಿ ಬ್ಯಾಂಕ್ ವರೆಗೆ ರಸ್ತೆ ಅಗಲೀಕರಣ ಹಾಗೂ