ಮಂಡ್ಯ: ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ತಲಕಾವೇರಿ ಯಾತ್ರೆ
Mandya, Mandya | Nov 12, 2025 ಮಂಡ್ಯ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ತಲಕಾವೇರಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಂಡ್ಯದ ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ರೈತರು, ಸೈನಿಕರು ಮತ್ತು ನಾಡಿನ ಜನತೆಯ ಒಳಿತಿಗಾಗಿ ತಲಕಾವೇರಿ ಯಾತ್ರೆಗೆ ಚಾಲನೆ ನೀಡಿದೆ. ಕಳೆದ 18 ವರ್ಷಗಳಿಂದ ಕಾವೇರಿ ಯಾತ್ರೆ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಈ ಯಾತ್ರೆಗೆ ಜೆಡಿಎಸ್ ಮುಖಂಡ ರಾಮಚಂದ್ರ ಅವರು ಚಾಲನೆ ನೀಡಿದರು.