ಬೈಲಹೊಂಗಲ: ನೇಸರಗಿ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಬಿಜೆಪಿ ತಂಡ
ನೇಸರಗಿ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಬಿಜೆಪಿ ತಂಡ. ಈರಣ್ಣಗೌಡ ಮೀಸಿ ಪಾಟೀಲ್ ಅವರ ಜಮೀನಿಗೆ ಭೇಟಿ ನೀಡಿದ ನಿಯೋಗವು ಗಜ್ಜರಿ ಬೆಳೆ ಹಾನಿಯ ಬಗ್ಗೆ ರೈತರಿಂದ ಮಾಹಿತಿ ಸಂಗ್ರಹಿಸಿತು. ಈ ಸಂದರ್ಭದಲ್ಲಿ, ರಾಜ್ಯ ಬಿಜೆಪಿ ನಾಯಕರೊಂದಿಗೆ ರಮೇಶ್ ಜಾರಕಿಹೊಳಿ ಕಡಾ ಉಪಸ್ಥಿತರಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಶುಕ್ರವಾರ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ಬಿಜೆಪಿ ನಾಯಕರು ಬೆಳೆ ಹಾನಿಯನ್ನು ವೀಕ್ಷಸಿದರು