ಶಿರಸಿ: ನಗರದ ಮೊಬೈಲ್ ಅಂಗಡಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ
ಶಿರಸಿ ನಗರದ ನಟರಾಜ ರಸ್ತೆಯ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಗುರುವಾರ ಮಧ್ಯಾಹ್ನ 12ರ ವೇಲೆ ಸಂಭವಿಸಿದೆ. ರಶೀದ್ ಖಾನ್ ಮುಲ್ಲಾ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತ ಪಡಿಸಲಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿದ್ದು ಸಿಬ್ಬಂದಿಗಳು ಬೆಂಕಿ ಆರಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.