ಇಳಕಲ್: ನಗರದ ಶ್ರೀ ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಲ್ಲಿ ಅದ್ದೂರಿಯಾಗಿ ನಡೆದ ಪದವಿ ಪ್ರಧಾನ ಸಮಾರಂಭ
Ilkal, Bagalkot | Oct 16, 2025 ಇಳಕಲ್ಲದ ಶ್ರೀ ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ರಾಮಣ್ಣ ಪರಪ ಕರಡಿ ಆಯುರ್ವೇದ ಆಸ್ಪತ್ರೆಯಲ್ಲಿ ವಿಶಿಖಾನುಪ್ರವೇಶ ಪದವಿ ಪ್ರಧಾನ ಸಮಾರಂಭ ಅ.೧೬ ಮಧ್ಯಾಹ್ನ ೨ ಗಂಟೆಗೆ ಚರಕ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಗುರುಮಹಾಂತಶ್ರೀಗಳು ಜ್ಯೊತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ನ ಎಸ್.ಎಂ.ಗೊAಗಡಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಪ್ರಶಾಂತ ಎ.ಎಸ್. ಸಂಘದ ಉಪಾಧ್ಯಕ್ಷ ಸಿ.ಪಿ.ಸಾಲಿಮಠ, ರತ್ನಾಕರ ಹೂಲಿ, ಸಂಘದ ವೈಸ್ ಚೇರಮನ್ನ ಅರುಣ ಬಿಜ್ಜಲ, ಪ್ರಧಾನ ಕಾರ್ಯದರ್ಶಿ ಡಿ.ಎನ್.ದೇವಗಿರಿಕರ. ಶ್ರೀವಿಜಯ ಮಹಾಂತೇಶ ಆಯುರ್ವೇದ ಮಹಾವಿದ್ಯಾಲಯ