ಶೋರಾಪುರ: ಭಾರೀ ಮಳೆಗೆ ಕೊಚ್ಚಿ ಹೋದ ಸೋನಾಪುರ ತಾಂಡದ ರಸ್ತೆ, ಗ್ರಾಮಸ್ಥರ ಹಾಗೂ ರೈತರ ಗೋಳಾಟ
ಭಾರೀ ಮಳೆಗೆ ಕೊಚ್ಚಿ ಹೋದ ಸೋನಾಪುರ ತಾಂಡದ ರಸ್ತೆ ಗ್ರಾಮಸ್ಥರ ಗೋಳಾಟ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಸೊನ್ನಾಪುರ ತಾಂಡಾದ ರಸ್ತೆ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಗ್ರಾಮಸ್ಥರು ಜಮೀನುಗಳಿಗೆ ಹಾಗೂ ಕಕ್ಕೇರ ಪಟ್ಟಣಕ್ಕೆ ಹೋಗಲು ರಸ್ತೆ ಇಲ್ಲದಂತಾಗಿದೆ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ರಸ್ತೆ ಮಾರ್ಗ ಆರಂಭಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬರುತ್ತಿದ್ದು ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿಕೊಂಡು ಹೋಗುತ್ತಿವೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ರಸ್ತೆ ದುರಸ್ತಿ ಪಡಿಸುತ್ತಾರ ಕಾದು ನೋಡಬೇಕಾಗಿದೆ