ಕೊಳ್ಳೇಗಾಲ: ಮಧುವನಹಳ್ಳಿ ಬಳಿ ಕಾರು ಪಲ್ಟಿ: ಶಬರಿಮಲೆ ಯಾತ್ರೆಯಿಂದ ವಾಪಾಸಾಗುತ್ತಿದ್ದ 5 ಮಂದಿಗೆ ಪೆಟ್ಟು
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ಕಾರು ಪಲ್ಟಿಯಾಗಿ 5ಮಂದಿಗೆ ಪೆಟ್ಟಾಗಿರುವ ಪ್ರಸಂಗ ಜರುಗಿದೆ ಕೊಳ್ಳೇಗಾಲ ತಾಲೂಕಿನಮದುವನಹಳ್ಳಿ ಗ್ರಾಮದ ಹತ್ತಿರ ಮ.ಮ.ಬೆಟ್ಟ ಕಡೆಯಿಂದ ಕೊಳ್ಳೇಗಾಲ ಕಡೆ ತೆರಳುತ್ತಿದ್ದ ಕೆಎ 11ಎನ್ 4719 ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಚಾನೆಲ್ ಗೆ ಬಿದ್ದಿದ್ದು ಈ ವೇಳೆಬಮಂಡ್ಯದ ಸ್ವರ್ಣಸಂದ್ರ ವಾಸಿಗಳು ಪ್ರಸನ್ನ, ಕೆಂಪರಾಜು, ತಿಮ್ಮೇಗೌಡ, ಚಾಮುಂಡೇಶ್ವರಿ ನಗರ ವಾಸಿ ಮಂಜುನಾಥ್, ಸುಂಡ್ರಳ್ಳಿಯ ಕೆಂಪರಾಜು, ಗಾಯಗೊಂಡಿದ್ದು ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಹಾಗೂ 3 ಜನರನ್ನು ಆಂಬುಲೆನ್ಸ್ ನಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸಗೆ ರವಾನಿಸಿದ್ದಾರೆ