ದಾಂಡೇಲಿ: ಶಿಕ್ಷಕಿ ರೆಗಿನಾ ಜೋಸೆಫ್ ಡಿಸೋಜಾ ಅವರಿಗೆ ರಾಜ್ಯಮಟ್ಟದ "ಬಸವಶ್ರೀ" ಪ್ರಶಸ್ತಿಯ ಗರಿ
ದಾಂಡೇಲಿ : ನಗರದ ಸೋರಗಾವಿ ಇಂಟರ್ ನ್ಯಾಷನಲ್ ಸ್ಕೂಲಿನ ಮುಖ್ಯೋಪಾಧ್ಯಾಯನಿ ರೆಗಿನಾ ಜೋಸೆಫ್ ಡಿಸೋಜಾ ಅವರು ರಾಜ್ಯಮಟ್ಟದ ಬಸವ ಶ್ರೀ ಪ್ರಶಸ್ತಿಗೆ ಭಾಜನರಾಗಿ ಶಾಲೆಗೆ ಹಾಗೂ ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ. ಧಾರವಾಡದ ನಾಟ್ಯ ಸ್ಪೂರ್ತಿ ಆರ್ಟ್ಸ್ ಮತ್ತು ಕಲ್ಚರಲ್ ಅಕಾಡೆಮಿ ಕೊಡಮಾಡುವ ಬಸವಶ್ರೀ ಪ್ರಶಸ್ತಿಯನ್ನು ಇಂದು ಭಾನುವಾರ ಸಂಜೆ 5:00 ಗಂಟೆ ಸುಮಾರಿಗೆ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ರೆಗಿನಾ ಜೋಸೆಫ್ ಡಿಸೋಜಾ ಅವರು ಸ್ವೀಕರಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅನುಪಮಾ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ರೆಗಿನಾ ಜೋಸೆಫ್ ಡಿಸೋಜಾ ಅವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು