ಕೊಪ್ಪ: ಬಾಳೆಗಿಡವನ್ನ ಸಿಗಿದು ಹಾಕಿದ ಕಾಡುಹಂದಿ.! ಜಯಪುರ ಬಳಿ ಕಾಡುಹಂದಿ ಕೃತ್ಯ ಸೆರೆ.!
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿ ಮಾನವನ ಸಂಘರ್ಷ ಮುಂದುವರಿಯುತ್ತಲೇ ಇದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪ ಬಾಳೆ ತೋಟವೊಂದರಲ್ಲಿ ಕಾಡು ಹಂದಿ ಬಾಳೆ ಗಿಡವನ್ನು ಸಿಗಿದು ಹಾಕುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸರಿಯಾಗಿದ್ದು, ಮಲೆನಾಡಿಗರು ಅರಣ್ಯ ಇಲಾಖೆಯ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ.