ಕುಕನೂರ: ಮಂಗಳೂರು ಗ್ರಾಮದಲ್ಲಿನ ನಾಡಕಚೇರಿ ಕಟ್ಟಡದ ಮೇಲ್ ಛಾವಣಿ ಶೀತಿಲ ದುರಸ್ತಿಗೆ ಮಲ್ಲನಗೌಡ ಒತ್ತಾಯ
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿನ ನಾಡಕಚೇರಿ ಕಂದಾಯ ಕಟ್ಟಡದ ಮೇಲ್ ಛಾವಣಿ ಶೀತಿಲ ಗೊಂಡಿದ್ದು ಕಳಚಿ ಬೀಳುತ್ತಿದೆ. ಸೆಪ್ಟೆಂಬರ್ 20 ರಂದು ಸಂಜೆ 6-30 ಗಂಟೆಗೆ ಕೊಪ್ಪಳ ಜಿಲ್ಲೆಯ ಜೆಡಿಎಸ್ ಪಕ್ಷದ ವಕ್ತಾರ ಮಲ್ಲನಗೌಡ ಕೋನನಗೌಡರ ನಾಡಕಚೇರಿಯ ದುರಸ್ತಿಗೆ ಒತ್ತಾಯಿಸಿದ್ದಾರೆ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಮತ್ತು ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುವ ನೌಕರರಿಗೆ ತೊಂದರೆಯಾಗಿದೆ ಕೂಡಲೆ ದುರಸ್ತಿ ಗೊಳಿಸಬೇಕು ಎಂದು ಒತ್ತಾಯಿಸಿದರು