ಬೆಂಗಳೂರು ಉತ್ತರ: ಐಷರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರೂ ಅರೆಸ್ಟ್
ವಿದ್ಯಾರಣ್ಯ ಪೊಲೀಸರು ಬುಧವಾರ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಗಗನ್ ಮತ್ತು ನೀತಿನ್ ಬಂಧಿತ ಆರೋಪಿಗಳು. ಇವರು ಹಲಸೂರು ಗೇಟ್, ಹೈಗೌಂಡ್, ಉಪ್ಪಾರಪೇಟೆ, ಬಸವನಗುಡಿ, ಬಾಗಲಗುಂಟೆ, ರಾಜಾಜಿನಗರ, ಮಲ್ಲೇಶ್ವರಂ, ಹೊಸಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುತ್ತಿದ್ದರು. ತಮ್ಮ ಗುರುತು ಪತ್ತೆಯಾಗಬಾರದೆಂದು ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಕಬ್ಬಿಣದ ರಾಡ್ ಬಳಸಿ ಕೃತ್ಯ ಎಸಗುತ್ತಿದ್ದರು. ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಕಳ್ಳತನದ ಚಾಳಿ ಬಿಟ್ಟಿರಲಿಲ್ಲ.