ಮಂಡ್ಯ: ಜಾತಿಗಣತಿ ಸಮೀಕ್ಷೆ ವಿರುದ್ದ ರೊಚ್ಚಿಗೆದ್ದ ಒಕ್ಕಲಿಗರು, ನಗರದಲ್ಲಿ ಅವೈಜ್ಞಾನಿಕ ಜಾತಿಗಣತಿ ಸಮೀಕ್ಷೆ ಆರೋಪ
Mandya, Mandya | Oct 6, 2025 ಜಾತಿಗಣತಿ ಸಮೀಕ್ಷೆ ವಿರುದ್ದ ರೊಚ್ಚಿಗೆದ್ದ ಒಕ್ಕಲಿಗ ಮುಖಂಡರು, ಅವೈಜ್ಞಾನಿಕ ಜಾತಿಗಣತಿ ಸಮೀಕ್ಷೆ ಎಂದು ಗಂಭೀರ ಆರೋಪಿಸಿದರು. ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಡಿಸಿ ಮೂಲಕ ಹಿಂದೂಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ ರಾಜ್ಯ ಒಕ್ಕಲಿಗರ ಸಂಘ ಮುಖಂಡರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನಲ್ಲಿಗೆರೆ ಬಾಲು ನೇತೃತ್ವದಲ್ಲಿ ಮನವಿ ಸಲ್ಲಿಸಿ, ಮಕ್ಕಳ ಕೈಯಲ್ಲಿ ಜಾತಿ ಸಮೀಕ್ಷೆ ಮಾಡಿಸುತ್ತಿದ್ದಾರೆ. ಸಮೀಕ್ಷೆದಾರರಿಗೆ ಸೂಕ್ತ ತರಬೇತಿ ನೀಡದೆ ಸಮೀಕ್ಷೆ ಮಾಡಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಸಮೀಕ್ಷೆ ಗೊಂದಲದಿಂದ ಕೂಡಿದೆ ಎಂದು ಆರೋಪಿಸಿದರು. ಅವೈಜ್ಞಾನಿಕ ಸಮೀಕ್ಷೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇಷ್ಟಬಂದ ರೀತಿ ಮಾಹಿತಿ ಬರೆದುಕೊಳ್ಳುತ್ತಿದ್ದಾರೆ.