ದಾವಣಗೆರೆ: ನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಗೂ ಪೊಲೀಸರ ಅಡ್ಡಿ: ಬೇರೆ ಮಾರ್ಗವಾಗಿ ಹೋಗಲು ಸೂಚನೆ, ಹೈಡ್ರಾಮ
ದಾವಣಗೆರೆ ನಗರದಲ್ಲಿ ನಾವು ಹೇಳಿದ ಮಾರ್ಗದಲ್ಲೆ ಗಣೇಶ ವಿಸರ್ಜನಾ ಮೆರವಣಿಗೆ ಹೋಗಬೇಕು ಎಂದು ಪೊಲೀಸರು ಸೂಚನೆ ನೀಡಿದಕ್ಕೆ ಯುವಕರು ವಿರೋಧ ವ್ಯಕ್ತಪಡಿಸಿ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ರಾತ್ರಿ ನಡೆಯಿತು. ಬಸವರಾಜ ಪೇಟೆಯಲ್ಲಿ ಪ್ರತಿಷ್ಠಾಪನೆಯನ್ನು ಮಾಡಿದ್ದ ಗಣೇಶನನ್ನು ಪ್ರತಿ ವರ್ಷ ಮೆರವಣಿಗೆ ಮಾಡುತ್ತಿದ್ದ ಮಾರ್ಗವನ್ನು ಬದಲಾಯಿಸಿ ಬೇರೆ ಮಾರ್ಗವಾಗಿ ಹೋಗಲು ಪೊಲೀಸರು ಸೂಚನೆ ನೀಡಿದರು ಇದನ್ನು ಯುವಕರು ಮಹಿಳೆಯರು ವಿರೋಧಿಸಿದರು.