ಬೆಂಗಳೂರು ಉತ್ತರ: ದಾಖಲೆ ಇಲ್ಲದೆ ಆಟೋ ಓಡಿಸ್ತಿದ್ದಾರಾ ಬಾಂಗ್ಲಾದವು? ವಿಡಿಯೋ ವೈರಲ್
ಬೆಂಗಳೂರಿನಲ್ಲಿ ದಾಖಲೆಗಳಿಲ್ಲದೆ ಆಟೋ ಚಾಲನೆ ಮಾಡುತ್ತಿರುವ ಮೂವರು ಸ್ವಯಂಘೋಷಿತ ಬಾಂಗ್ಲಾದೇಶಿಗರ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಸೆಕ್ಯೂರಿಟಿ ಕೆಲಸಕ್ಕಿಂತ ಆಟೋ ಚಾಲನೆಯಲ್ಲಿ ಉತ್ತಮ ಆದಾಯ ಸಿಗುತ್ತದೆ ಎಂದು ಹೇಳುತ್ತಾ, ತಮ್ಮ ಊರಿನವರಿಗೆ ಬೆಂಗಳೂರಿಗೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಈ ವಿಡಿಯೋ ಸಾರ್ವಜನಿಕರಲ್ಲಿ ಅನುಮಾನ ಮತ್ತು ಆತಂಕ ಮೂಡಿಸಿದೆ.