ಶಿವಮೊಗ್ಗ: ಬೆಳ್ಳಂಬೆಳಗ್ಗೆ ಶಾಸಕರಿಂದ ಶಿವಮೊಗ್ಗ ಸಿಟಿ ರೌಂಡ್
ಬೆಳ್ಳಂಬೆಳಗ್ಗೆ ಶಿವಮೊಗ್ಗದ ಶಾಸಕ ಎಸ್ಂಚಬಸಪ್ಪ ಅವರು ಸಿಟಿ ರೌಂಡ್ ಹಾಕಿದ್ದಾರೆ.ಮಂಗಳವಾರ ಶಿವಮೊಗ್ಗದ ವಿವೇಕಾನಂದ ಬಡಾವಣೆಗೆ ದಿಢೀರ್ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಅವರು, ಸ್ಥಳೀಯ ನಿವಾಸಿಗಳ ದೈನಂದಿನ ಜೀವನದ ಕೊರತೆಗಳು ಮತ್ತು ಮೂಲಭೂತ ಸೌಕರ್ಯಗಳ ಕುರಿತಾಗಿರುವಂತಹ ಸಮಸ್ಯೆಗಳನ್ನ ಕೂಲಂಕುಶವಾಗಿ ಪರಿಶೀಲಿಸಿದರು.ಬಳಿಕ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.