ಕುಮಟಾ: ವೈದ್ಯಕೀಯ ಪರೀಕ್ಷೆ ವೇಳೆ ಪೊಲೀಸರ ಕೈನಿಂದ ತಪ್ಪಿಸಿಕೊಂಡಿದ್ದ ಕಳ್ಳತನ ಆರೋಪಿ ಮಂಡ್ಯದಲ್ಲಿ ಬಂಧನ ಪಟ್ಟಣದ ಪೊಲೀಸರಿಂದ ಮಾಹಿತಿ
ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಭಟ್ಕಳದ ಪೌಸಿನ್ ಅಹ್ಮದ್ ಎಂಬಾತನು ವೈದ್ಯಕೀಯ ಪರೀಕ್ಷೆ ವೇಳೆ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಇದೀಗ ಆತನನ್ನು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕುಮಟಾ ಪೊಲೀಸರು ಬಂಧಿಸಿರುವ ಬಗ್ಗೆ ಮಂಗಳವಾರ ಸಂಜೆ 5ಕ್ಕೆ ಮಾಹಿತಿ ಲಭ್ಯವಾಗಿದೆ. ಭಟ್ಕಳದಲ್ಲಿ ಶುಕ್ರವಾರ ಪೊಲೀಸರು ಪೌಸಿನ್ ಅಹ್ಮದ್ನನ್ನು ಬಂಧಿಸಿ, ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ನಂತರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಪೊಲೀಸರಿಂದ ತಪ್ಪಿಸಿಕೊಂಡಿದ್ದ.