ನಕಲಿ ಕ್ಲಿನಿಕ್ ಗಳ ಹಾವಳಿ ತಡೆಯಲು ಬಹುಜನ ಕನ್ನಡ ರಕ್ಷಣಾ ಸೇನೆ ಒತ್ತಾಯ ಮುಳಬಾಗಿಲು ತಾಲ್ಲೂಕಿನಲ್ಲಿ ನಕಲಿ ಕ್ಲಿನಿಕ್ ಗಳ ಹಾವಳಿ ಹೆಚ್ಚಾಗಿದ್ದು, ತಾಲ್ಲೂಕು ಆರೋಗ್ಯ ಇಲಾಖೆ ನಕಲಿ ಕ್ಲಿನಿಕ್ ಗಳನ್ನು ತಡೆಗಟ್ಟಲು ವಿಫಲವಾಗಿದೆ ಎಂದು ಬಹುಜನ ಕನ್ನಡ ರಕ್ಷಣಾ ಸೇನೆ ಪದಾಧಿಕಾರಿಗಳು ಶಿರೇಸ್ದಾರ್ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈಗಾಗಲೇ ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ಕ್ಲಿನಿಕ್ ಗಳ ಹಾವಳಿಯಿಂದ ಅಮಾಯಕ ಬಡ ಜನರು ಚಿಕಿತ್ಸೆ ಪಡೆದು ಸಾವನ್ನಪ್ಪಿದ ಘಟಕಗಳು ನಡೆದಿವೆ. ಇಷ್ಟಾದರೂ ಸಹ ಆರೋಗ್ಯ ಇಲಾಖೆ ನಕಲಿ ಕ್ಲಿನಿಕ್ ತಡೆಗಟ್ಟಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದ