ಬೀದರ್: ಭಗವಂತ ಖೂಬಾಗೆ ಮುಂದಿನ ಬಾರಿ ಟಿಕೆಟ್ ಕೂಡ ಸಿಗೋದಿಲ್ಲ : ನಗರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ
Bidar, Bidar | Oct 21, 2025 ಭಗವಂತ ಖೂಬಾಗೆ ಜನ ಕಳೆದ ಚುನಾವಣೆಯಲ್ಲಿ ಸೋಲಿಸಿ ಮನೆಯಲ್ಲಿ ಕೂಡಲು ಹೇಳಿದ್ದಾರೆ. ಮುಂದಿನ ಬಾರಿ ಟಿಕೆಟ್ ಕೂಡ ಸಿಗೋದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು. ಬೀದರ್ ಮಹಾನಗರ ಪಾಲಿಕೆ ಆಗಿದ್ದು ನನ್ನ ಪ್ರಯತ್ನದಿಂದ ಎಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಹೇಳಿದ್ದಾರೆ ಆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಸುದ್ದಿಗಾರರು ಮಂಗಳವಾರ ಸಂಜೆ 4:15ಕ್ಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.