ತುಮಕೂರು: ನಗರದ ಸಿದ್ದಿವಿನಾಯಕ ಪೆಂಡಾಲ್ ನಲ್ಲಿ ತಾರಕಾಸುರನ ಸಂಹಾರ ದೃಶ್ಯಾವಳಿ ನೋಡಲು ಜಿಲ್ಲೆಯಿಂದ ಜನರ ಆಗಮನ
ವಿದ್ಯುತ್ ಚಾಲಿತ ಬೊಂಬೆಗಳ ತಾರಕಾಸುರನ ಸಂಹಾರ ಅಥವಾ ಶ್ರೀ ಸಿದ್ಧಿ ವಿನಾಯಕ ವೈಭವ ದೃಶ್ಯಾವಳಿಯು ಜಿಲ್ಲೆಯ ಜನರನ್ನ ತನ್ನತ್ತ ಸೆಳೆಯುತ್ತಿದೆ. ತುಮಕೂರಿನ ವಿನಾಯಕ ನಗರದಲ್ಲಿ ಸಿದ್ದಿ ವಿನಾಯಕ ಸಮುದಾಯ ಭವನದಲ್ಲಿ ಶ್ರೀ ಸಿದ್ದಿ ವಿನಾಯಕ ಸೇವಾ ಮಂಡಳಿವತಿಯಿಂದ ಈ ದೃಶ್ಯ ರೂಪಕವನ್ನ ಪ್ರದರ್ಶನ ಮಾಡಲಾಗುತ್ತಿದೆ. ಭಾನುವಾರ ರಾತ್ರಿ 8 ರ ಸಮಯದಲ್ಲಿ ಈ ದೃಶ್ಯ ರೂಪಕವನ್ನ ನೋಡಲು ಸಹಸ್ರಾರು ಮಂದಿ ಪೆಂಡಾಲ್ ಕಡೆ ಆಗಮಿಸುತ್ತಿದ್ದರು. ಸಮುದಾಯದ ಭವನದ ಆವರಣದಲ್ಲಿ ಮಕ್ಕಳ ವೇಷ ಭೂಷಣ ಸ್ಪರ್ಧೆ ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದರೆ.ಸಮುದಾಯ ಭವನದಲ್ಲಿ ದೃಶ್ಯ ರೂಪಕ ನೋಡಲು ಜನರು ಆಗಮಿಸುತ್ತಿದ್ದರು.