ಕಲಬುರಗಿ : ಗೋವಾದಿಂದ ಅಕ್ರಮವಾಗಿ ಮದ್ಯ ಸರಬರಾಜು ಆಗ್ತಿರೋ ಬಗ್ಗೆ ಮಾಹಿತಿ ಇದೆ.. ಆದರೆ ಅಲ್ಲಿಂದ ಬರೋ ಮದ್ಯ ಕ್ವಾಲಿಟಿ ಇಲ್ಲ ಅಂತಾ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಹೇಳಿದ್ದಾರೆ.. ಡಿಸೆಂಬರ್ 28 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಗೋವಾದಿಂದ ನಾನಾ ರೀತಿಯಲ್ಲಿ ಮದ್ಯವನ್ನ ಅಕ್ರಮವಾಗಿ ಸಾಗಾಟ ಮಾಡ್ತಿದಾರೆ.. ಈ ಬಗ್ಗೆ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಕಟ್ಟುನಿಟ್ಟಾಗಿ ಮಾಡ್ತಿದ್ರು ಸಹ ಗೋವಾದಿಂದ ಮದ್ಯ ಸಾಗಾಟ ಆಗ್ತಿದೆ ಅಂತಾ ತಿಮ್ಮಾಪುರ ಹೇಳಿದ್ದಾರೆ