ಕುರುಗೊಡು: ಎಮ್ಮಿಗನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತಾಂತ್ರಿಕ ನಿರ್ವಹಣಾ ಕಾರ್ಯ, ಈ ಗ್ರಾಮಗಳಲ್ಲಿ ಡಿ.9ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ ಜಿಲ್ಲೆಯ ಕುರುಗೋಡು ಉಪ ವಿಭಾಗ ವ್ಯಾಪ್ತಿಯ ಎಮ್ಮಿಗನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯುವುದರಿಂದ ಡಿಸೆಂಬರ್ 9 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇದರಿಂದ ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಣಿ ಕ್ಯಾಂಪ್, ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್ ನಗರ, ಕೊಟ್ಬಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬಾರಾವ್ ಕ್ಯಾಂಪ್, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್ಗಳ ಕೃಷಿ ಪ್ರದೇಶಗಳು ಮತ್ತು ಗ್ರಾಮಗಳು, ಹಾಗೂ ಎಮ್ಮಿಗನೂರು ನಗರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಡಿ.6, ಶನಿವಾರ ಸಂ