ಬೀಡಿ ಗ್ರಾಮದಲ್ಲಿ ನಿವೃತ್ತ ವೃದ್ಧ ಯೋಧನ ಮೇಲೆ ಪೊಲೀಸರ ದರ್ಪ. ಚಿಕ್ಕಮುನವಳ್ಳಿ ಗ್ರಾಮದ ಚೆನ್ನಮಲ್ಲಪ್ಪ ಕುಂಬಾರ ಎಂಬ ಮಾಜಿ ಯೋಧ, ಹೆಲ್ಮಟ್ ಇಲ್ಲದಕ್ಕೆ ದಂಡ ವಿಧಿಸುವ ವಿಚಾರದಲ್ಲಿ ನಂದಗಡ ಪೊಲೀಸ್ ಠಾಣೆಯ ಪೊಲೀಸರು ಹಲ್ಲೆ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶುಕ್ರವಾರ, ಸಾರ್ವಜನಿಕ ಸ್ಥಳದಲ್ಲಿಯೇ ನಿವೃತ್ತ ವೃದ್ಧ ಯೋಧನೊಬ್ಬನಿಗೆ ಪೊಲೀಸರು ಬೂಟುಗಾಲಿನಿಂದ ಒದ್ದು ಲಾಠಿ ಏಟು ನೀಡಿ ದರ್ಪ ಮೆರೆದ ಘಟನೆ ನಡೆದಿದೆ.