ಮಂಗಳೂರು: ಕುದ್ರೋಳಿಯಲ್ಲಿ ಮಸೀದಿ ದರ್ಶನ: ಸರ್ವಧರ್ಮೀಯರು ಭಾಗಿ
ಕುದ್ರೋಳಿಯ ಜಾಮಿಯಾ ಮಸೀದಿ ಆಡಳಿತ ಸಮಿತಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ವತಿಯಿಂದ ಸಾರ್ವಜನಿಕರಿಗೆ ಮಸೀದಿಯನ್ನು ವೀಕ್ಷಿಸುವ ಅವಕಾಶವನ್ನು ರವಿವಾರ ಕಲ್ಪಿಸಲಾಯಿತು. ಮಧ್ಯಾಹ್ನ 12ರಿಂದ ಸರ್ವಧರ್ಮೀಯರು ಮಸೀದಿ ವೀಕ್ಷಿಸತೊಡಗಿದ್ದು, ಮುಸ್ಸಂಜೆ 7ರವರೆಗೆ ವೀಕ್ಷಿಸಬಹುದಾಗಿದೆ. ಅದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಇದು ದಿವ್ಯತೆಯ ದರ್ಶನವಾಗಿದೆ. ಪ್ರಾರ್ಥನೆಯ ವೇಳೆ ಕಣ್ಣು ಮುಚ್ಚಿದರೂ ಆಂತರಿಕ ಕಣ್ಣು ತೆರೆಯುತ್ತೇವೆ ಎಂದು ಹೇಳಿದರು.