ಶೋರಾಪುರ: ನಗರಸಭೆ ಆವರಣದಲ್ಲಿ ನಗರಸಭೆಗೆ ನೂತನ ನಾಮನಿರ್ದೇಶನ ಸದಸ್ಯರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಂದ ಸನ್ಮಾನ
ಯಾದಗಿರಿ ಜಿಲ್ಲೆಯ ಸುರಪುರ ನಗರಸಭೆಗೆ ನೂತನವಾಗಿ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿರುವ ಸೋಮರಾಯ ಶಾಖಾಪುರ್, ಪ್ರಕಾಶ್ ಆಲಬಾನೂರ್, ಸಾಬಣ್ಣ ಮಡಿವಾಳ, ಅವರನ್ನು ಸುರಪುರ ಮತಕ್ಷೇತ್ರದ ಶಾಸಕ ರಾಜ ವೇಣುಗೋಪಾಲ್ ನಾಯಕ್ ಅವರು ಸನ್ಮಾನಿಸಿ ಅಭಿನಂದಿಸಲಾಯಿತು ನಂತರ ಶಾಸಕರು ಮಾತನಾಡಿ ನೂತನ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದು ನಗರದಲ್ಲಿ ಉತ್ತಮವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ನೂತನ ನಾಮನಿರ್ದೇಶನ ಸದಸ್ಯರಿಂದ ಕೂಡ ಶಾಸಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು