ದಾಂಡೇಲಿ : ನಗರದ ಜೆ.ಎನ್.ರಸ್ತೆಯ ಪುಟ್ಪಾತಿನಲ್ಲಿ ಗೂಡಂಗಡಿದಾರರು ಹೆಚ್ಚುವರಿಯಾಗಿ ಅತಿಕ್ರಮಣ ಮಾಡಿರುವುದನ್ನು ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ 4:00 ಗಂಟೆ ಸುಮಾರಿಗೆ ಪೌರಕಾರ್ಮಿಕರ ಮೂಲಕ ತೆರವುಗೊಳಿಸಲಾಯ್ತು. ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕ ವಿಲಾಸ್ ಉಪಸ್ಥಿತರಿದ್ದರು. ಇಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ ಅತಿಕ್ರಮಣ ಮಾಡಿರುವುದನ್ನು ಗಮನಿಸಿದ ನಗರಸಭೆ ತೆರವುಗೊಳಿಸಲು ಅಗತ್ಯ ಕ್ರಮವನ್ನು ಕೈಗೊಂಡಿತು