ಇಳಕಲ್: ರಕ್ತದಾನ ಮಾಡುವದರಿಂದ ಆರೋಗ್ಯ ಉತ್ತಮ : ನಗರದಲ್ಲಿ ಬಿಜೆಪಿ ಮುಖಂಡ ರಾಜುಗೌಡ ಪಾಟೀಲ
Ilkal, Bagalkot | Sep 25, 2025 ರಕ್ತದಾನ ಮಾಡುವುದರಿಂದ ಆರೋಗ್ಯ ಮತ್ತಷ್ಟು ಉತ್ತಮವಾಗುತ್ತದೆ ಎಂದು ಬಿಜೆಪಿ ಮುಖಂಡ ರಾಜುಗೌಡ ಪಾಟೀಲ ಹೇಳಿದರು. ಬಾಗಲಕೋಟ ಜಿಲ್ಲೆಯ ಇಳಕಲ್ದ ಗೊಂಗಡಶೆಟ್ಟಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾ, ವಿಜಯ ಮಹಾಂತ ರಕ್ತ ಕೇಂದ್ರ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಸೆ.೨೫ ರಂದು ಮಧ್ಯಾಹ್ನ ೧೨ ಗಂಟೆಗೆ ನಡೆದ ಪಂಡಿತ ದೀನದಯಾಳ ಉಪಾಧ್ಯಾಯ, ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು . ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಲಕ್ಷö್ಮಣ ಗುರಂ, ಹಿರಿಯ ಮುಖಂಡ ಮಹಾಂತಪ್ಪ ಚನ್ನಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಗಡಿಯಣ್ಣನವರ, ಎಂ.ಆರ್.ಪಾಟೀಲ. ಮಲ್ಲಯ್ಯ ಮೂಗನೂರ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು