ದಾವಣಗೆರೆ: ಪಾಲಿಕೆಯಿಂದ ನಗರದಲ್ಲಿ ಮತದಾನ ಜಾಗೃತಿ ಜಾಥಾ
ಮಹಾನಗರ ಪಾಲಿಕೆಯಿಂದ ನಗರದಲ್ಲಿ ಭಾನುವಾರ ಬೈಕ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಯಿತು. ದುರ್ಗಾಂಬಿಕಾ ದೇವಸ್ಥಾನ ದಿಂದ ಪ್ರಾರಂಭವಾದ ಜಾಥಾ ಕಾಳಿಕಾದೇವಿ ರಸ್ತೆ, ದೊಡ್ಡಪೇಟೆ ಗಣಪತಿ ದೇವಸ್ಥಾನ, ಹೋಂಡಾದ ಸರ್ಕಲ್, ಜಾಲಿ ನಗರ ಮುಖ್ಯರಸ್ತೆ, ಕೊಂಡಜ್ಜಿ ರಸ್ತೆ ಮೂಲಕ ಸಾಗಿ ಆರ್‌ಟಿಒ ವೃತ್ತದಲ್ಲಿ ಸಮಾರೋಪಗೊಂಡಿತು. ಅಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕರಾದ ಬಿ.ಪ್ರಕಾಶ, ಮಹಾಂತೇಶ, ನೀಲಪ್ಪ, ಉಮ್ಲಾ ನಾಯಕ, ತನ್ವೀರ್ ಅಹ್ಮದ್, ದುಗ್ಗೇಶ, ಶ್ರೀಧರ ಮೂರ್ತಿ, ಉಮೇಶ, ನಾಗಣ್ಣ ಇತರರು ಇದ್ದರು.