ಶೋರಾಪುರ: ನಾಗಪುರ ದೀಕ್ಷಾ ಭೂಮಿಗೆ ನಗರದ ತಹಸಿಲ್ದಾರ್ ಕಚೇರಿ ಮುಂದೆ ತಹಸಿಲ್ದಾರ್ ಹುಸೇನ್ ಸಾಬ್ ಚಾಲನೆ ವಿವಿಧ ಅಧಿಕಾರಿಗಳು ಭಾಗಿ
, ಬೌದ್ಧ ಧರ್ಮೀಯರ ಯಾತ್ರಾ ಸ್ಥಳವಾಗಿರುವ ನಾಗಪುರದ ದೀಕ್ಷಾಭೂಮಿಗೆ ಸುರಪುರ ನಗರದಿಂದ ಬೌದ್ಧ ಧರ್ಮೀಯರ ದರ್ಶನಕ್ಕಾಗಿ ಸುರಪುರ ನಗರದ ತಹಶೀಲ್ದಾರ್ ಕಚೇರಿ ಮುಂದೆ ತಹಸಿಲ್ದಾರ್ ಹುಸೇನ್ ಸಾಬ್ ಚಾಲನೆ ನೀಡಿದ್ದಾರೆ. ಸರ್ಕಾರದ ಈ ಯೋಜನೆ ಅಡಿಯಲ್ಲಿ ಸುರಪುರ ತಾಲೂಕಿನಿಂದ 49 ಜನ ನಾಗಪುರ ದೀಕ್ಷಾ ಭೂಮಿಗೆ ತಮ್ಮ ಪ್ರಯಾಣವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಪ್ರಯಾಣದ ವಾಹನಕ್ಕೆ ತಹಸಿಲ್ದಾರರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಫ್ ಡಿ ಎ ಜಾಕಿರ್ ಹುಸೇನ್, ಎಸ್.ಡಿ.ಸಿ ರಮೇಶ ಮುಂಡರಗಿ, ಹಾಗೂ ಎನ್.ಎಂ ಪೀರಗೋಳ, ಕಾಳಪ್ಪ ಪತ್ತಾರ್, ಮೆಹಬೂಬ್ ಮಾದೇವಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು