ಹಿರಿಯೂರು: ಹಿರಿಯೂರು ನಗರದಲ್ಲಿ ಉಪ ವಿಭಾಗಾಧಿಕಾರಿಗಳಾದ ಮೆಹಬೂಬ್ ಜಿಲಾನಿ ಖುರೇಶಿ ಅಧ್ಯಕ್ಷತೆಯಲ್ಲಿ ಪಹಣಿ ತಿದ್ದುಪಡಿ ಅಭಿಯಾನ
ಇಂದು ದಿನಾಂಕ 17 09 2025 ಕರ್ನಾಟಕ ಸರ್ಕಾರ, ಕಂದಾಯ ಇಲಾಖೆಯಡಿ ಜಿಲ್ಲಾಡಳಿತದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳವರ ಆದೇಶದ ಮೇರೆಗೆ ಇಂದು ನಗರದ ಹಿರಿಯೂರು ತಾಲ್ಲೂಕು ಕಚೇರಿ ಆವರಣದಲ್ಲಿ ಚಿತ್ರದುರ್ಗ ಉಪ ವಿಭಾಗಾಧಿಕಾರಿಗಳಾದ ಶ್ರೀ ಮೆಹಬೂಬ್ ಜಿಲಾನಿ ಖುರೇಷಿ ಅವರ ಅಧ್ಯಕ್ಷತೆಯಲ್ಲಿ" ಪಹಣಿ ತಿದ್ದುಪಡಿ ಅಭಿಯಾನ " ಹಮ್ಮಿಕೊಳ್ಳಲಾಗಿತ್ತು. ಅಭಿಯಾನ ಉದ್ದೇಶಿಸಿ ಮಾತನಾಡಿದ ಉಪ ವಿಭಾಗಾಧಿಕಾರಿಗಳು.. ತಾಲ್ಲೂಕಿನ ರೈತರ ಪಹಣಿಗಳಲ್ಲಿ ಕಾನೂನು ವ್ಯಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.