ಗುಡಿಬಂಡೆ: ಕುರಿ ತುಂಬಿದ್ದ ವಾಹನ ಪಲ್ಟಿ, 10 ಕುರಿಗಳು ಸ್ಥಳದಲ್ಲೇ ಸಾವು.ಗೌರಿಬಿದನೂರು - ಗುಡಿಬಂಡೆ ಮಾರ್ಗದ ವಾಟದಹೊಸಹಳ್ಳಿ ಕ್ರಾಸ್ ಬಳಿ ಘಟನೆ
ಗೌರಿಬಿದನೂರು ತಾಲ್ಲೂಕಿನ ಉದಗೂರು ಗ್ರಾಮದಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಕುರಿ ಸಂತೆಗೆ ಕುರಿಗಳು ಸಾಗಿಸುತ್ತಿದ್ದ ಬೊಲೇರೋ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿರುವ ಘಟನೆ ನಡೆದಿದೆ ವಾಹನ ಚಾಲಕ ಪ್ರಾಣಾಪಾಯದಿಂದ ಪಾರು. ಗೌರಿಬಿದನೂರು ತಾಲ್ಲೂಕಿನ ಉದಗೂರು ಗ್ರಾಮದ ರೈತರ 40 ಕುರಿಗಳ ಪೈಕಿ 10 ಕುರಿಗಳು ಸಾವು..ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.