ಮಳವಳ್ಳಿ: ತಾಲ್ಲೂಕಿನ ಚೆನ್ನಪಿಳ್ಳೆಕೊಪ್ಪಲು ಗ್ರಾಮದ ಬಳಿ ನೂತನ ನಂದಿನ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿದ ಶಾಸಕ ನರೇಂದ್ರಸ್ವಾಮಿ
ಮಳವಳ್ಳಿ : ತಾಲ್ಲೂಕಿನ ಚನ್ನಪಿಳ್ಳೇ ಕೊಪ್ಪಲು ಗ್ರಾಮದ ಬಳಿಯ ಮಳವಳ್ಳಿ ಮೈಸೂರು ಹೆದ್ದಾರಿಯ ಸಮೀಪ ನೂತವಾಗಿ ಆರಂಭಿಸಿ ರುವ ನಂದಿನಿ ಹಾಲು ಹಾಗೂ ಉತ್ಪನ್ನಗಳ ಮಾರಾಟ ಮಳಿಗೆ ಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಬುಧವಾರ ಉದ್ಘಾಟಿಸಿ ದರು. ಸಾಯಂಕಾಲ 5.30ರ ಸಮಯ ದಲ್ಲಿ ನಂದಿನಿ ಪಾರ್ಲರ್ ಉದ್ಘಾಟಿಸಿದ ಶಾಸಕರು ನಂದಿನಿ ಉತ್ಪನ್ನಗಳು ದೇಶಾಧ್ಯಂತ ಮಾರಾಟವಾಗಿ ರೈತರ ಬದುಕು ಹಸನಾಗಲಿ ಎಂದು ಶುಭ ಕೋರಿದರು.