ದೇವದುರ್ಗ: ದೇವದುರ್ಗ : ಹತ್ತಿ ಖರೀದಿ ಕೇಂದ್ರ ಸ್ಥಾಪಿಸಿ, 9100 ಬೆಂಬಲ ಬೆಲೆ ಖರೀದಿಗೆ ಒತ್ತಾಯ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅರಕೇರಾ ಘಟಕದಿಂದ ವತಿಯಿಂದ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಬೇಕು ಜೊತೆಗೆ 9100 ಬೆಂಬಲ ಬೆಲೆಗೆ ರೈತ ಹತ್ತಿಯನ್ನು ಖರೀದಿ ಮಾಡಬೇಕೆಂದು ಒತ್ತಾಯಸಿ ತಶೀಲ್ದಾರ್ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲ್ಲೂಕಿನಾದ್ಯಂತ ಅಪಾರ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇವದುರ್ಗ ತಾಲೂಕಿನಲ್ಲೂ ರೈತರು ಸಂಪೂರ್ಣ ನಷ್ಟ ಹೊಂದಿದ್ದು ಅಳಿದು ಉಳಿದ ಹತ್ತಿಯನ್ನು ಇದೀಗ ಬಿಡಿಸಿಕೊಳ್ಳುತ್ತಿದ್ದಾರೆ. ಬೆಲೆಯಿಲ್ಲದೆ ಸಾಕಷ್ಟು ರೈತರು ಮತ್ತು ನಷ್ಟದ ಕೃಪಕ್ಕೆ ಹೋಗುತ್ತಾರೆ ಹಾಗಾಗಿ ಸರ್ಕಾರ ಕೂಡಲೇ ದೇವದುರ್ಗದಲ್ಲಿ ಖರೀದಿ ಕೇಂದ್ರ ತೆಗೆದು ಬೆಂಬಲ ಬೆಲೆಗೆ ಖರೀದಿಸಬೇಕು ಎಂದು ಒತ್ತಾಯಿಸಿದರು.