ರಾಯಚೂರು: ಹಿಂದು ಸಮಾಜ ಒಡೆದು ಹಾಕಬೇಕು ಅನ್ನೋದು ಲವ್ ಜಿಹಾದ್
ಆರ್ ಎಸ್ ಎಸ್ ಪ್ರಚಾರ ವಿಭಾಗದ ಮುಖಂಡ ಕೃಷ್ಣ ಜೋಷಿ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡುತ್ತಾ, ಭಾರತವನ್ನ ಒಡೀಬೇಕು ಅಂತ ಕೆಲವರು ಇದ್ದಾರೆ. ಜಾತಿ ಆಧಾರದಲ್ಲಿ ಹಿಂದೂಗಳನ್ನು ಒಡೆಯವರು ಇದ್ದಾರೆ. ಹಿಂದೂ ಸಮಾಜದ ಸುರಕ್ಷೆತೆಗೆ ಸಮಸ್ಯೆ ಮಾಡಲಾಗ್ತಿದೆ. ಅಂಥವರಿಗೆ ದೇಶ ಹಾಳು ಮಾಡೋಕೆ ಹೊರಟಿರೋರಿಗೆ ಜಿಹಾದಿ ಮಾನಸೀಕತೆ ಅಂತ ಕರೀತೇನೆ. ಅವರ ಉದ್ದೇಶ, ಭಾರತವನ್ನ ಒಡೆಯುವುದು. ಲವ್ ಜಿಹಾದ್ ಅನ್ನೋದು ಒಂದು, ಹಿಂದು ಸಮಾಜ ಒಡೆದು ಹಾಕಬೇಕು ಅನ್ನೋದು ಲವ್ ಜಿಹಾದ ಎನ್ನುತ್ತಾರೆ ಎಂದರು