ಮಾಗಡಿ: ರಾಜ್ಯಪಾಲರಿಗೆ ಮನವಿ ಕೊಟ್ಟರೆ ಸಮಸ್ಯೆ ಬಗೆ ಹರಿಯಲ್ಲ: ಪಟ್ಟಣದಲ್ಲಿ ಶಾಸಕ ಬಾಲಕೃಷ್ಣ
ರಾಜ್ಯಪಾಲರಿಗೆ ಮನವಿಯನ್ನ ಕೊಟ್ಟ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು. ಮಾಗಡಿ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವ ವಿಚಾರವಾಗಿ ವಕೀಲರು ಹಾಗೂ ಸಂಸದರು ರಾಜ್ಯಪಾಲರಿಗೆ ಮನವಿಯನ್ನ ಮಾಡಿದ್ದಾರೆ. ರಾಜ್ಯಪಾಲರಿಗೂ ಸೋಲರಿಗು ಏನು ಸಂಬಂಧ. ಸೋಲೂರಿನ ಜನ ಹೋರಾಟಕ್ಕೆ ಇಳಿದು ತಮ್ಮ ಹಕ್ಕನ್ನ ಪಡೆದುಕೊಳ್ಳಬೇಕು ಅಂತ ತಿಳಿಸಿದರು.