ಜಗದ್ಗುರು ರಾಮಾನಂದಚಾರ್ಯ ನರೇಂದ್ರಾಚಾರ್ಯ ಅವರ ಪಾದುಕೆ ದರ್ಶನ ಕಾರ್ಯಕ್ರಮವನ್ನು ನವೆಂಬರ್ 2 ರಂದು ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಚನಕಾರಣಿ ಅಂಬಿಕಾ ಯಾದವ ರೆಡ್ಡಿ ಹೇಳಿದರು. ಮಹಾರಾಷ್ಟ್ರದ ರತ್ನಗಿರಿಯ ದಕ್ಷಿಣ ಪೀಠದ ನಾಣೀಜಧಾಮ, ಜಗದ್ಗುರು ರಾಮಾನಂದಚಾರ್ಯ ನರೇಂದ್ರಾಚಾರ್ಯ ಅವರ ಪಾದುಕೆಗಳ ದರ್ಶನ ಕಾರ್ಯಕ್ರಮ ನಿಮಿತ್ತ ಅಂದು ಬೆಳಗ್ಗೆ 8 ಗಂಟೆಗೆ ನಗರೇಶ್ವರ ದೇವಸ್ಥಾನದಿಂದ ಎಲ್ ವಿ ಡಿ ಮುಂಭಾಗದ ರಾಧಾಕೃಷ್ಣ ಕಲ್ಯಾಣ ಮಂಟಪದವರಿಗೆ ಮೆರವಣಿಗೆ ಆಯೊಜಿಸಲಾಗಿದೆ ಎಂದರು.