ಕಲಬುರಗಿ: ಬಿಜೆಪಿಯವರು ಒಮ್ಮೆಯಾದ್ರು ಅವ್ರ ಮಕ್ಕಳಿಗೆ ಲಾಂಗು, ಚೂರಿ ಕೊಟ್ಟಿದಾರ? ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಕಲಬುರಗಿ : ಮಾತು ಎತ್ತಿದ್ರೆ ತಲೆ ಕಡಿರಿ, ತೊಡೆ ಕಾಲು ಮುರಿರಿ ಅಂತಾ ಸಿಟಿ ರವಿ ಹೇಳ್ತಾರೆ.. ಯಾವತ್ತಾದರೂ ಇವರು ತಮ್ಮ ಮಕ್ಕಳಿಗೆ ಈ ರೀತಿ ಹೇಳಿದಾರ? ಮಗನೇ ನಾನು ನಿನ್ನ ಜೊತೆ ಇದಿನಿ.. ತಲೆ ಕಡಿ ಅಂತಾ ಹೇಳಿದಾರ? ತಮ್ಮ ಮಕ್ಕಳನ್ನ ಬಿಟ್ಟು ಬೇರೆ ಮಕ್ಕಳಿಗೆ ಪ್ರಚೋದನೆ ಮಾಡ್ತಾರೆ ಅಂತಾ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಸೆ15 ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಅಷ್ಟಿದ್ರೆ ಅವರ ಮಕ್ಕಳ ಕೈಗೆ ಚೂರಿ, ಲಾಂಗು ಕೊಟ್ಟು ಕಡಿಯೋಕೆ ಹೇಳಲಿ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.