ವಡಗೇರಾ: ಅನವಾರ ಗ್ರಾಮದಲ್ಲಿ ಮಹಾಮಳೆಯಿಂದ ಮನೆಗೆ ನೀರು ನುಗ್ಗಿ ವಸ್ತುಗಳು ಹಾನಿ ಪರಿಹಾರಕ್ಕೆ ಮನವಿ ಮಾಡಿದ ಕುಟುಂಬದ ಮರೆಮ್ಮ ಹೊಸ್ಮನಿ
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಅನವಾರ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಬಾರಿ ಪ್ರಮಾಣದಲ್ಲಿ ಹಾಲಿ ಕುಂಟು ಮಾಡಿದ್ದು ಇದರಿಂದ ಕುಟುಂಬಸ್ಥರು ಕಣ್ಣೀರು ಸುರಿಸುವಂತಾಗಿದೆ. ಅನವಾರ ಗ್ರಾಮದ ಮಹಿಳೆ ಮರಿಯಮ್ಮ ಹೊಸಮನಿ ಅವರ ಮನೆಯಲ್ಲಿ ನೀರು ಹೊಕ್ಕಿದ್ದರಿಂದ ಮನೆಯಲ್ಲಿರುವ ಎಲ್ಲ ವಸ್ತುಗಳು ನೆನೆದು ಹಾಳಾಗಿವೆ, ಮನೆಯಲ್ಲಿನ ಯಾವುದೇ ಅಗತ್ಯ ವಸ್ತುಗಳು ಇಲ್ಲದ್ದರಿಂದಾಗಿ ಊಟ ಮಾಡಲಾಗುತ್ತಿಲ್ಲ ಎಂದು ಕುಟುಂಬದ ಯಜಮಾನ ಅಳಲು ತೋಡಿಕೊಂಡು ಸರಕಾರ ತಮಗೆ ಪರಿಹಾರ ನೀಡಬೇಕು ಮತ್ತು ಮನೆಯನ್ನು ಕಲ್ಪಿಸಬೇಕು ಎಂದು ಅಂಗಲಾಚಿದ್ದಾರೆ.